ದೇವು ನಿರ್ದೇಶನದ ಚಂದ್ರು, ಮಾನಸಿ, ಸ್ಪೂರ್ತಿ ನಟಿಸುತ್ತಿರುವ ಹೊಸ ಚಿತ್ರ ಪಂದ್ಯ ಬಹುತೇಕ ಚಿತ್ರೀಕರಣವನ್ನು ಮುಗಿಸಿ ಮುಕ್ತಾಯ ಹಂತದಲ್ಲಿದೆ. ಕೆ. ಮಂಜುನಾಥ್ ಅವರು ಅದ್ಧೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ಸಕಲೇಶಪುರ, ಚಿಕ್ಕಮಗಳೂರು, ಗೋವಾ ಸೇರಿದಂತೆ ಕರ್ನಾಟಕದ ರಮ್ಯ ಮನೋಹರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ.
ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಚಿತ್ರಾ ಶೆಣೈ, ಎಂ.ಎನ್. ಲಕ್ಷ್ಮಿದೇವಿ, ಸಂಕೇತ್ ಕಾಶಿ, ಸಂಗೀತ, ಮುನಿ, ಮಾಲತಿ ಸರದೇಶಪಾಂಡೆ, ಶೈಲಜಾ ಜೋಷಿ, ಸಪ್ನ, ಸುಚಿತ್ರ, ರವಿ ಮಡಿಕೆಹಳ್ಳಿ, ಸುಕುಮಾರ್ ಮುಂತಾದವರ ತಾರಾಗಣ ಹಾಗೂ ಹಂಸಗೋಪಿ ಸಂಗೀತ ನಿರ್ದೇಶನ ನೀಡಿದ್ದಾರೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.
ಯಜ್ಞಾ ಶೆಟ್ಟಿ ಪಾಲ್ಗೊಳ್ಳುತ್ತಿರುವ ಕಲರ್ಫುಲ್ ಹಾಡಿನ ಚಿತ್ರೀಕರಣ ೦೫.೦೭.೨೦೧೨ರ ಗುರುವಾರದಂದು ಗವೀಪುರಂ ಗುಟ್ಟಹಳ್ಳಿಯಲ್ಲಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ನಡೆಯಲಿದೆ.